Thursday, 9 October 2014

life ಅಲ್ಲಿ josh ಇರಬೇಕು

life ಅಲ್ಲಿ josh ಇರಬೇಕು
heart ಅಲ್ಲಿ dum ಇರಬೇಕು
ತೋಳಲ್ಲಿ ತಾಕತ್ತಿರಬೇಕು
ಇಲ್ಲಾಂದ್ರೆ.. ಮಠ ಸೇರಿಕೋಬೇಕು

ಓಡಾಡೋಕ್ car ಇರಬೇಕು
car ತುಂಬಾ ಫ್ರೆಂಡ್ಸ್ ಇರಬೇಕು
ಫ್ರೆಂಡ್ಸ್ ಗೇಲಿ ಮಾಡ್ತಿರಬೇಕು
ಇಲ್ಲದಿದ್ರೆ.. ಮಠ ಸೇರಿಕೋಬೇಕು..

ನೋಡಿದೋರು thrill ಆಗಬೇಕು
ಅಂಥದ್ದು ಮಾಡಬೇಕು
ಸಾಧಿಸಿ ತೋರಿಸಬೇಕು
ಇಲ್ಲದಿದ್ರೆ.. ಮಠ ಸೇರಿಕೋಬೇಕು

ಎಲ್ಲದಕ್ಕು ಖುಷಿ ಪಡಬೇಕು
ಹಾಡುತ್ತ ಕುಣಿಯಬೇಕು
celebrate ಮಾಡಬೇಕು
ಇಲ್ಲದಿದ್ರೆ.. ಮಠ ಸೇರಿಕೋಬೇಕು

ದೇಶಕ್ಕೆ ಒಳ್ಳೆ ಪ್ರಜೆಯಾಗಬೇಕು
ಅಸಹಾಯಕರಿಗೆ help ಮಾಡಬೇಕು
ಕುವೆಂಪು ಹೇಳಿರೋಹಾಗೆ ಮಾನವನಾಗಬೇಕು
ಇಲ್ಲದಿದ್ರೆ.. ಮಠ ಸೇರಿಕೋಬೇಕು..

Nanna Preethi

ಓ ಪ್ರೀತಿಯೇ, ಓ ಪ್ರೇಯಸಿಯೇ
ನನ್ನ ಬಾಳಿಗೆ ನೀನೇ ಸಿರಿಯೇ
ಅರಿತು ನನ್ನ ನೋವನು
ನನ್ನ ಬಾಳಿಗೆ ಬಂದೆ ನೀನು

ಗೆಳತಿಯೆ ಸಾಂತ್ವಾನವ ತಂದೆ
ನಗುತಿರು ಗೆಳೆಯನೆ ಎಂದೆ
ದಿನಗಳು ಹೊರಳುತ ಬಂತು
ಗೆಳೆತನವು ಪ್ರೀತಿಗೆ ತಿರುಗಿತು

ಮಾತು ಹೆಚ್ಚಿತು ಕನಸು ಬೆಳೆಯಿತು
ಕನಸಿನ ಲೋಕವ ಮನಸು ಕಟ್ಟಿತು
ವಿಧಿಯ ಕೆಂಗಣ್ಣು ನಮ್ಮ ಮೇಲೆ ಬಿತ್ತು
ಕನಸ ಜೋಕಾಲಿ ಮುರಿದು ಬಿತ್ತು

ದಿನ ರಾತ್ರಿ ಮಲಗುವ ಮುನ್ನ
ಬೇಡುವೆ ನಾನು ಆ ದೇವನ
ನೀಡು ಅವಳ ಪ್ರೀತಿಯ ನನಗೆ
ಕೈಮುಗಿಯುವೆ ಮಾಡಿಸು ನಮ್ಮಿಬರ ಮದುವೆ

ಮದುವೆ ಇಂದಲೇ ಪ್ರೀತಿ ಶಾಶ್ವತ ಎನ್ನಲಾರೆ
ಆದರೆ ಅವಳನು ನಾ ಎಂದಿಗೂ ಮರೆಯಲಾರೆ
ಬುದ್ದಿಯಲೋ ಹೃದಯದಲೋ ಉಸಿರಲಿಹಳೊ ಗೊತ್ತಿಲ್ಲ
ನಾ ಸತ್ತರೂ ನನ್ನ ಪ್ರೀತಿ ಸಾಯೊಲ್ಲ

Wednesday, 8 October 2014

ಮಳೆಗಾಲದ ಬೆಂಗಳೂರು

ಜಾಮು ಜಾಮು
ಜಾಮು ಜಾಮು
ಕಿಸಾನ್ ಜಾಮು ಅಲ್ಲ
ಟ್ರ್ಯಾಫಿಕ್ ಜಾಮು ಎಲ್ಲ

ಮಳೆಗಾಲದ ಬೆಂಗಳೂರು
ಜನ ಜೀವನ ಏರು ಪೆರು
ಟಿವಿ 9 ಹೆಡ್ಡು ಲೈನ್ಸು
ಬರೀಬೇಕು ಅನಿಸ್ತು ನನಗೂ ರೈಮ್ಸು

ರಸ್ತೆ ಪಕ್ಕ ಮರ ಬುಡಮೇಲು
ನದಿಗಳು ನೋಡಿ ಬೆಂಗ್ಳೂರಲ್ಲೂ
ಯಾಕಿಲ್ಲಿ ಹುಯ್ತಿಯೋ ಮಳೆರಾಯ
ಹೂವಿನ ತೋಟ ಇಲ್ಲಿ ಯಾರದೈತಯ್ಯಾ

ಎಂಪ್ಲಾಯಿಸು ಆಫೀಸಲ್ಲಿ ಜಾಮು
ವಾಹನಗಳು ರೋಡಲ್ಲಿ ಜಾಮು
ಕಬ್ಬನ್ ಪಾರ್ಕಲ್ಲಿ ಲವರ್ಸ್ ಜಾಮು
ಎಣ್ಣೆ ಅಂಗಡಿಲಿ ಜೂಮು ಜೂಮು

ಕ್ಲಚ್ ಹಿಡ್ದು ಹಿಡ್ದು ಎಡಗೈ ನೋವು
ಬ್ರೇಕ್ ತುಳ್ದು ತುಳ್ದು ಬಲ ಕಾಲು ನೋವು
ನಾಳೆ ಆಫೀಸಿಗೆ ಗ್ಯಾರಂಟಿ ಲೀವೂ
ನನ್ಹಂಗೆ ಅನ್ಕೋತಿದೀರಾ ನೀವೂ

ಜಾಮು ಜಾಮು
ಜಾಮು ಜಾಮು
ಕಿಸಾನ್ ಜಾಮು ಅಲ್ಲ
ಟ್ರ್ಯಾಫಿಕ್ ಜಾಮು ಎಲ್ಲ