Saturday, 17 December 2016

ಮಲಗೂ ಮಲಗೆನ್ನಾ ಕಂದ

ಮಲಗೂ ನನ್ನಾ ಕಂದ
ಸೂರ್ಯ ಜಾರಿದ ಬಾನಿನಿಂದ
ತಾವರೆಯಂತೆ ಕಣ್ಣು ಮುದುರುತಿದೆ
ಆಯಾಸದಿಂದ ಮೊಗವು ಸೊರಗುತಿದೆ


ಮಲಗೂ ಮಲಗೆನ್ನಾ ಕಂದ
ಜೊಜೊ ಜೋಜೋ ಜೋಜೋ


ಮೆತ್ತಗೆ ಹಾಸಿದೆ ಬೆಚ್ಚಗೆ ಹೊದಿಸಿದೆ
ಸಣ್ಣನೆ ದೀಪವು ಕಗ್ಗತಲ ಮರೆಸಿದೆ
ಮೆಲ್ಲನೆ ಆಟಿಕೆಗಳ ಮರೆಯುತಲಿ
ಅಮ್ಮನ ಲಾಲಿ ಜೋಜೋ ಸವಿಯುತಲಿ


ಮಲಗೂ ಮಲಗೆನ್ನಾ ಕಂದ
ಜೊಜೊ ಜೋಜೋ ಜೋಜೋ


ಚಂದಿರ ಬಂದಿಹನು ನಕ್ಷತ್ರಗಳೊಡನೆ
ನಿದಿರೆಯ ತಂದಿಹನು ಸಿಹಿಗನಸುಗಳೊಡನೆ
ಶಾಂತಿಯ ಸಾರುವ ಬುದ್ಧನಂತೆ
ಮಲಗು ಚಿಪ್ಪಿನೊಳ ಮುತ್ತಿನಂತೆ


ಮಲಗೂ ಮಲಗೆನ್ನಾ ಕಂದ
ಜೊಜೊ ಜೋಜೋ ಜೋಜೋ


ಮಲಗೂ ನನ್ನಾ ಕಂದ
ಆಡುವ ನಾಳೆ ಆನಂದದಿಂದ
ಮಲಗೂ ಮಲಗೆನ್ನಾ ಕಂದ
ನೀಡುತ ನಗುವ ಮಕರಂದ

                                    - ಉಪಾಸನಾ

ಪ್ರೇಮದ ಫಲವೋ.. ದೇವರ ವರವೋ

ನಮ್ಮ ಪ್ರೇಮದ ಫಲವಾಗಿ
ಈ ಒಲುಮೆಯ ಲತೆಯಲ್ಲಿ
ಹೂವೊಂದು ಹಣ್ಣಗುತಿರಲು
ಮನದಲ್ಲಿ ಸಂತಸದ ಹೊನಲು

ಆಶಿಸುತಿಹೆವು ಯುವರಾಣಿಗಾಗಿ
ಅವತರಿಸು ಕಂದ ಆರೋಗ್ಯವಾಗಿ
ಅಮ್ಮನ ಒಡಲ ರಕ್ಷೆಯಲ್ಲಿ
ಬೆಳೆಯೇ ನೀ ಹಂತ ಹಂತದಲ್ಲಿ

ನೋಡಲು ಜಗ ಕಾದಿಹುದು
ಕೇಳಲು ನಿನ್ನ ತೊದಲು
ನಿನ್ನ ಮುಗ್ಧ ನಗುವು
ಮರೆಸಲಿ ಎಲ್ಲರ ನೋವು

ನನ್ನ ಗೆಳತಿ

ರವಿವರ್ಮನ ಚಿತ್ರವಲ್ಲ
ಕವಿವರ್ಯರ ಕವಿತೆಯಲ್ಲ
ತಂಪಾಗಿ ಹೊಳೆಯುವ ಚಂದ್ರನಲ್ಲ, ತಾರೆಯಲ್ಲ..
ನನ್ನ ಗೆಳತಿ ನೀನು.. ನನ ಗೆಳತಿ
ಮನದೋಡತಿ ನೀನು ನನ ಗೆಳತಿ


ಬೇಲೂರಿನ ಶಿಲ್ಪವಲ್ಲ
ಸ್ವರ್ಗಲೋಕದ ಅಪ್ಸರೆಯು ಅಲ್ಲ
ಇಂದ್ರನಾಸ್ಥಾದ ರಂಬೆಯಲ್ಲ, ಮೆನಕೆಯಲ್ಲ
ನನ್ನ ಗೆಳತಿ ನೀನು.. ನನ ಗೆಳತಿ
ಮನದೋಡತಿ ನೀನು ನನ ಗೆಳತಿ


ಕಂಪು ಸೂಸುವ ಪಾರಿಜಾತವಲ್ಲ
ಕೆಂಪು ತೋಟದ ಗುಲಾಬಿಯಲ್ಲ
ದುಂಡು ಮಲ್ಲಿಗೆಯಲ್ಲ, ಕೆಂಡ ಸಂಪಿಗೆಯಲ್ಲ
ನನ್ನ ಗೆಳತಿ ನೀನು.. ನನ ಗೆಳತಿ
ಮನದೋಡತಿ ನೀನು ನನ ಗೆಳತಿ


ನಿನ್ನ ಪ್ರೀತಿಯ ಬಣ್ಣಿಸುವುದಿಲ್ಲ
ನನ್ನ ಪ್ರೀತಿಯ ನಿವೇದಿಸುವುದು ಇಲ್ಲ
ನಾ ಪದ ಕಟ್ಟುವ ಕವಿಯು ಅಲ್ಲ, ನೀನು ನನ್ನ ಕವಿತೆಯಲ್ಲ
ನನ್ನ ಗೆಳತಿ ನೀನು.. ನನ ಗೆಳತಿ
ಮನದೋಡತಿ ನೀನು ನನ ಗೆಳತಿ