ರವಿವರ್ಮನ ಚಿತ್ರವಲ್ಲ
ಕವಿವರ್ಯರ ಕವಿತೆಯಲ್ಲ
ತಂಪಾಗಿ ಹೊಳೆಯುವ ಚಂದ್ರನಲ್ಲ, ತಾರೆಯಲ್ಲ..
ನನ್ನ ಗೆಳತಿ ನೀನು.. ನನ ಗೆಳತಿ
ಮನದೋಡತಿ ನೀನು ನನ ಗೆಳತಿ
ಬೇಲೂರಿನ ಶಿಲ್ಪವಲ್ಲ
ಸ್ವರ್ಗಲೋಕದ ಅಪ್ಸರೆಯು ಅಲ್ಲ
ಇಂದ್ರನಾಸ್ಥಾದ ರಂಬೆಯಲ್ಲ, ಮೆನಕೆಯಲ್ಲ
ನನ್ನ ಗೆಳತಿ ನೀನು.. ನನ ಗೆಳತಿ
ಮನದೋಡತಿ ನೀನು ನನ ಗೆಳತಿ
ಕಂಪು ಸೂಸುವ ಪಾರಿಜಾತವಲ್ಲ
ಕೆಂಪು ತೋಟದ ಗುಲಾಬಿಯಲ್ಲ
ದುಂಡು ಮಲ್ಲಿಗೆಯಲ್ಲ, ಕೆಂಡ ಸಂಪಿಗೆಯಲ್ಲ
ನನ್ನ ಗೆಳತಿ ನೀನು.. ನನ ಗೆಳತಿ
ಮನದೋಡತಿ ನೀನು ನನ ಗೆಳತಿ
ನಿನ್ನ ಪ್ರೀತಿಯ ಬಣ್ಣಿಸುವುದಿಲ್ಲ
ನನ್ನ ಪ್ರೀತಿಯ ನಿವೇದಿಸುವುದು ಇಲ್ಲ
ನಾ ಪದ ಕಟ್ಟುವ ಕವಿಯು ಅಲ್ಲ, ನೀನು ನನ್ನ ಕವಿತೆಯಲ್ಲ
ನನ್ನ ಗೆಳತಿ ನೀನು.. ನನ ಗೆಳತಿ
ಮನದೋಡತಿ ನೀನು ನನ ಗೆಳತಿ
No comments:
Post a Comment