Wednesday, 7 September 2016

ಕಾವೇರಿ.. ಕಾವು

ಕಾವೇರಿ.. ಕಾವು ಏರಿ
ತಮಿಳುನಾಡ ಕಿರಿಕಿರಿ
ಸುಪ್ರೀಂ ತೀರ್ಪು ಕೊಟ್ಟು
ಕರುನಾಡಿಗೆ ಭಾರಿ ಪೆಟ್ಟು

ಬಂದು ನೋಡಿ ನೀರೆಲ್ಲಿದೆ
ಕರ್ನಾಟಕವೇ ಬತ್ತಿದೆ
ಕುಡಿಯಲೇ ನೀರಿಲ್ಲ
ಕೋರ್ಟಿಗೆ ಕಣ್ಣಿಲ್ಲ

ಬಂದ್ ಮೇಲೆ ಬಂದ್
ವ್ಯವಹಾರಗಳು ಬಂದ್
ನಷ್ಟ.. ಖಜಾನೆ ಖಾಲಿ
ಜನಸಾಮಾನ್ಯನೆ ಬಲಿ

ನದಿ ಜೋಡಣೆ ಎಂದು
ಈ ಸಮಸ್ಯೆಗೆ ಕೊನೆ ಎಂದು
ಯಾರನ್ನು ಕೇಳುವುದು
ಬೇಲಿಯೆ ಹೊಲ ಮೆಯ್ಯುತಿಹುದು

ಮನೆಗೆ ಮಾರಿ
ಪರರಿಗೆ ದಾರಿ
ನಮ್ಮ ಸರ್ಕಾರ
ನೆರೆ ರಾಜ್ಯಕೆ ಆಹಾರ

No comments:

Post a Comment