Wednesday, 14 June 2017

ಬಿಸಿಲು ಮಳೆ

ಮುಸ್ಸಂಜೆಯಲಿ ಬಿಸಿಲು ಮಳೆಯ ಚೆಂದ
ಪೂರ್ವದಲಿ ಕಾಮನಬಿಲ್ಲಿನ ಅಂದ
ನಿಸರ್ಗ ಸೌಂದರ್ಯದ ನಡುವೆ
ಜೀವ ಮಾನವರ ಬಾಳುವೆ

ಮಳೆಯಲ್ಲಿ ನೆನೆಯುತಿಹನು ಭಿಕ್ಷುಕ
ಬಹು ದಿನಗಳ ಕೊಳೆಯ ತೊಳೆಯುತಿಹನು
ಛತ್ರಿಯ ಕೆಳಗೆ ಸಾಮಾನ್ಯನು
ಸಂತಸದಿ ತಂಪಾಗಿ ನಡೆಯುತಿಹನು

ಎಲ್ಲೊ ಕುದುರೆಯು ಕೂಗುತ ದೌಡು
ಹಕ್ಕಿಗಳ ಕಲರವದ ಇಂಪಾದ ಹಾಡು
ಅಯ್ಯೋ ಮಳೆ! ಎಂದು ಗೊಣಗುತಾ
ಕಾರು ಚಲಿಸುತಿಹನು ಶ್ರೀಮಂತ

Sunday, 12 February 2017

ನಾಮಕರಣ ಆಹ್ವಾನ


ಅಖಿಲಾಂಡ ಕೋಟಿ ಬ್ರಹ್ಮಾಂಡದಲ್ಲಿ
ಈ ಸುಂದರವಾದ ಜೀವ ಗ್ರಹದಲ್ಲಿ
ಅಕ್ಕರೆಯ ಮದ್ದು ಕಂದ ನಾನೊಂದು
ನನ್ನನ್ನು ನೀವು ಕರೆಯುವಿರಿ ಏನೆಂದು?

ನಿಶ್ಚಯಿಸಿಹರು ಹೆಸರೊಂದ ನನಗೆ
ಕರೆದರೆ ನಾನು ಪುಟಿದೇಳುವ ಹಾಗೆ
ಶಿವನ ಎರಡನೇ ಹೆಸರು ಇದಂತೆ
ಇದರ ಅರ್ಥ ಆಲೋಚನೆಯಂತೆ

ಆಶೀರ್ವದಿಸಿ ಬನ್ನಿ ನನ್ನ ನಾಮಕರಣ ಮಾಡಿ